Thursday, July 23, 2020

ಚಂದನವಾಹಿನಿಯಲ್ಲಿ ಬರುತ್ತಿರುವ ಸೇತುಬಂಧಕ್ಕೆ ಸಂಬಂಧಿಸಿದ ರಸಪ್ರಶ್ನೆಗಳ ಲಿಂಕ್

10ನೆಯ ತರಗತಿಯ ಎರಡನೆಯ ದಿನದ (23/07/2020) ರಸಪ್ರಶ್ನೆ ಮಾಹಿತಿಯ ಲಿಂಕ್
https://docs.google.com/forms/d/e/1FAIpQLScE0jKnJZAxtFU9oLNgESoc9g4wTodv_VQij9KpDEKIqOqKFQ/viewform?usp=sf_link
 

9ನೆಯ ತರಗತಿಯ ಮೊದಲದಿನದ (24/07/2020) ರಸಪ್ರಶ್ನೆ ಮಾಹಿತಿಯ ಲಿಂಕ್
https://docs.google.com/forms/d/e/1FAIpQLSf_KLLVxLCaY-ARnV4l2oKGGusISNIgHjlibRaAH7gDAEb1Ag/viewform?usp=sf_link


8ನೆಯ ತರಗತಿಯ ಪಾಠ ಟಿಪ್ಪಣಿಯ ಲಿಂಕ್
https://drive.google.com/drive/folders/1-_MHXha-f88inFDRlPCbY7luzADpCW0A?usp=sharing


9ನೆಯ ತರಗತಿಯ ಪಾಠ ಟಿಪ್ಪಣಿಯ ಲಿಂಕ್
https://drive.google.com/drive/folders/1J4AgUlVm6iVzU97RQ0Qu4ToLNph3p2Zw?usp=sharing

10ನೆಯ ತರಗತಿಯ ಪಾಠ ಟಿಪ್ಪಣಿಯ ಲಿಂಕ್
https://drive.google.com/drive/folders/0B3kZf68qIExWejRzc3ItLUxhbVk?usp=sharing

<iframe src="https://drive.google.com/file/d/197A-iAIdMpCFXGv3Efq6MhXGRVmWxNPs/preview" width="640" height="480"></iframe>

Wednesday, July 22, 2020

ನನ್ನ ಪರಿಚಯ

ನಮಸ್ಕಾರ ಎಲ್ಲರಿಗೂ
ನಾನು ವೆಂಕಟೇಶ ಎಂ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಕಾನುಗೋಡಿನವನು. ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ನಮ್ಮೂರಿನಲ್ಲೇ ಮುಗಿಸಿ, ನಂತರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಬೆಳೆಯೂರು ಹಾಗೂ ಬೇಳೂರಿನಲ್ಲಿ ಮುಗಿಸಿ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಭಾರತಿ ಪ್ರೌಢಶಾಲೆ ಕೆಳದಿ ಇಲ್ಲಿ ಸಂಪೂರ್ಣಗೊಳಿಸಿದೆನು. ನನ್ನ ಪದವಿ ಪೂರ್ವ ಶಿಕ್ಷಣವು ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದೊಂದಿಗೆ ಆರಂಭವಾಯಿತು. ನಂತರ ವಿಜ್ಞಾನ ವಿಷಯದಿಂದ ಕಲಾ ಶಿಕ್ಷಣದ ಕಡೆಗೆ ವಾಲಿದ ನಾನು ಪದವಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡು ಲಾಲ್ ಬಹದ್ದೂರ್ ಕಾಲೇಜು ಸಾಗರ ಇಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಏಳನೆಯ ರ್ಯಾಂಕ್ ಜೊತೆ ಮುಗಿಸಿದೆ. ನಂತರ ಬಿ.ಇಡಿ.ಯನ್ನು ಶಿವಮೊಗ್ಗದ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 5 ನೆಯ ರ್ಯಾಂಕ್ ಜೊತೆ ಮುಗಿಸಿ, ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣದ ಮೂಲಕ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡೆನು. 2004 ರಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರೌಢಶಾಲಾ ಶಿಕ್ಷಕನಾಗಿ ನೇಮಕಗೊಂಡು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡನಾಯಕನಹಳ್ಳಿಯಲ್ಲಿ 12 ವರ್ಷಗಳ ಕರ್ತವ್ಯವನ್ನು ಮಾಡಿ ಈಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.

Welcome to my blog